Index   ವಚನ - 32    Search  
 
ಈ ಶಿವಾದ್ವೈತವಹ ಶಿವಪರವಹ ಶಿವಸಿದ್ಧಾಂತ ತಂತ್ರವನು ಆವನಾನೊಬ್ಬ ಮಹಾಪ್ರಭು ಅರಿವುತ್ತಂ ಇದ್ದಾನು ಆತನು ಅಜ್ಞಾನದ ಗಂಟುಗಳನು ಕಡಿದು ಬಿಸಡುವನಯ್ಯ ಶಾಂತವೀರೇಶ್ವರಾ ಇದು ಸಕಲ ಪುರಾತನನೋಕ್ತಿ ವೇದಾಗಮ ಪುರಾಣೋಪನಿಷದ್ವಾಚ್ಯಪ್ರತಿಪಾದಿತಾರ್ಥ ಪ್ರತಿಷ್ಠಾಚಾರ್ಯವರ್ಯ ದ್ವಿತೀಯ ಮುರಿಗಾಖ್ಯ ಶಿವಯೋಗೀಂದ್ರ ಜ್ಞಾನ ಪ್ರಸನ್ನಾರ್ಹ ಷಟಸ್ಥಲಾಚಾರ್ಯ ಸಿದ್ಧಲಿಂಗಾಖ್ಯ ಶಿವಯೋಗೀಶ್ವರ ಷಟ್ ಸ್ಥಲ ಜ್ಞಾನ ಪ್ರಸಾದ ಸಂತೃಪ್ತ ಷಟ್ ಸ್ಥಲಾದ್ವೈತ ವಿದ್ಯಾ ಪ್ರಮೋದಿತ ಬಾಲೇಂದುಪುರ ಶಾಂತವೀರೇಶ್ವರ ಕರಸರಸಿಜ ಸಂಭವ ಪರ್ವತ ಶಿವಯೋಗಿ ನಿರೂಪಿತ ಮುಕ್ತಿ ಚರಿತಮಪ್ಪ ಏಕೋತ್ತರ ಶತಸ್ಥಲದೊಳನುಭವ ನಿರ್ದೇಶಸ್ಥಲ ಸಂಪೂರ್ಣ ಮಂಗಳಮಸ್ತು. ಶೂನ್ಯಲಿಂಗಸ್ಥಲ ಸೂತ್ರ: ಅನಾದಿಯಾದ ಜಂಗಮವು ಲಿಂಗಕ್ಕೆ ಪ್ರಾಣವು ಆ ಲಿಂಗವು ಹಾಂಗೆಯೆ ಆ ಜಂಗಮಕ್ಕೆ ಪ್ರಾಣವಾದಾತನು, ತಾನೆ ಆ ಲಿಂಗಕ್ಕೆ ಅಂಗವಾದಾತನು ಆ ಲಿಂಗಕ್ಕೆ ಕಾರಣ ರೂಪವು ಅದು ಕಾರಣದಿಂದೆ ಆ ಜಂಗಮದತ್ತಣಿಂದೆ ಶೂನ್ಯಲಿಂಗವು ಹುಟ್ಟಿತ್ತಾಗಿ ಮುಂದೆ ಶೂನ್ಯಲಿಂಗಸ್ಥಲವಾದುದು.