Index   ವಚನ - 37    Search  
 
ಶರೀರವು ಇಲ್ಲ, ಕುಲವು ಇಲ್ಲ, ಕರಣಚತುಷ್ಟಯವೂ ಇಲ್ಲ, ಭೂತಭವಿಷ್ಯದ್ವರ್ತಮಾನ ಕಾಲಂಗಳಿಂದೆ ತೊಲಗಿದಂಥ ಶ್ರೋತ್ರಾದಿ ಇಂದ್ರಿಯಂಗಳು ಸುಖವು ಇಲ್ಲ. ಈ ಪ್ರಕಾರವಾದುದು ‘ಶೂನ್ಯಲಿಂಗ’ವೆಂದು ಹೇಳಿದುದಯ್ಯ ಶಾಂತವೀರೇಶ್ವರಾ