Index   ವಚನ - 38    Search  
 
ಶೂನ್ಯಲಿಂಗವಾಯಿತ್ತಾದೊಡೆ ಪ್ರಪಂಚವನೆಲ್ಲಾ ಶೂನ್ಯಮಯವನು ಮಾಡಿಕೊಂಡು ನಿಃಕಳಂಕಲಿಂಗವಾಗಿ ಉದಿಸಿತ್ತು. ಷಟ್ತ್ರಿಂಶ ತತ್ವ್ತಂಗಳನ್ನು ಮೀರಿದಂಥ ವಾಕ್ಯಕ್ಕಗೋಚರವಹ ಉತ್ಕೃಷ್ಟವಹ ತಾನೆ ಪರವಲ್ಲದೆ ತನಗೊಂದು ಪರವಿಲ್ಲದಂಥಾದೆ ನಿಃಕಳಲಿಂಗವಯ್ಯ ಶಾಂತವೀರೇಶ್ವರಾ