ಲಕ್ಷಿಸಲು ಬಾರದ ಕರ್ತೃಕರ್ಮಾದಿ ಭೇದ ಪ್ರಪಂಚವಿಲ್ಲದ
ಅವ್ಯಕ್ತ ಸದಾತ್ಮವಾದ ಚಂದ್ರಶೇಖರಾದಿ
ನಾನಾ ವಿಗ್ರಹರಹಿತವಾದ ಸರ್ವೋತ್ಕೃಷ್ಟವಾಗಿ ನಾಶರಹಿತವಹ ಶಿವ
ಭವಾದಿ ನಾಮ ರಹಿತವಾದ ಕರ ಚರಣಾದ್ಯವಯವ
ಶೂನ್ಯವಹ ಅಜ್ಞಾನಾದಿ ಕಳಂಕರಹಿತವಹ
ತನಗೊಂದು ಆದಿ ಇಲ್ಲದ ಜಗತ್ಕಾರಣ ವಸ್ತುವು
ನಿಃಕಳಂಕ ವಸ್ತುವು ನಿಃಕಳಶಿವತತ್ವವೆಂದು ಹೇಳಲಾಗುತ್ತದೆ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Lakṣisalu bārada kartr̥karmādi bhēda prapan̄cavillada
avyakta sadātmavāda candraśēkharādi
nānā vigraharahitavāda sarvōtkr̥ṣṭavāgi nāśarahitavaha śiva
bhavādi nāma rahitavāda kara caraṇādyavayava
śūn'yavaha ajñānādi kaḷaṅkarahitavaha
tanagondu ādi illada jagatkāraṇa vastuvu
niḥkaḷaṅka vastuvu niḥkaḷaśivatatvavendu hēḷalāguttade
śāntavīrēśvarā