Index   ವಚನ - 39    Search  
 
ಆ ಕಾರಣಂ ಆ ಕಾರಣವೆಂದರೆ ಬಿಂದು ಮಾಯೆಗಳೆಂಬ ಜಗತ್ಕಾರಣವಿಲ್ಲದೆ ಇದ್ದಂಥ ಆ ಕಾರ್ಯವೆಂದರೆ ಜಗದ್ರೂಪವಾದ ಕಾರ್ಯವಿಲ್ಲದಂಥ ವಾಙ್ಮನಸ್ಸುಗಳಿಗೆ ತಿಳಿಯಬಾರದಂಥ ಸಚ್ಚಿದಾನಂದವೆಂಬ ತ್ರಿಲಕ್ಷಣವಹ ವ್ಯಾಪಕವಹ ನಿಃಕಳಂಕ ತತ್ವವೆ ಶಿವನಯ್ಯ ಶಾಂತವೀರೇಶ್ವರಾ