Index   ವಚನ - 42    Search  
 
ಸುವರ್ಣಮಯವಾಗಿರ್ದ ಉತ್ಕೃಷ್ಟವಾದ ಹೃದಯಾಕಾಶದಲ್ಲಿ ರಜೋಗುಣಾತೀತವಾದ ಕಳಾತೀತವಾದ ಪರಬ್ರಹ್ಮವು ಆವುದಾದೊಂದುಂಟು ಅದು ನಿರ್ಮಲವಾದಂಥಾದುದು ಸೂರ್ಯಾದಿ ಜ್ಯೋತಿಗಳಿಗೆ ಜ್ಯೋತಿಸ್ವರೂಪವೆಂದು ಆತ್ಮಜ್ಞಾನಿಗಳು ತಿಳಿವುತ್ತಿಹರೆಂದು ‘ಮುಂಡಕೋಪನಿಷತ್ತು’ ಪೇಳ್ವುದಯ್ಯ ಶಾಂತವೀರೇಶ್ವರಾ ಸೂತ್ರ: ಇಂತು ಆ ನಿಃಕಳಂಕ ಲಿಂಗದ ಮಧ್ಯದಲ್ಲಿ ಇರುತ್ತಾದೊಡೆ ಸರ್ವಾಧಾರವಾದ ಮಹಾಲಿಂಗ ಉತ್ಪತ್ತಿಯಾಯಿತ್ತು, ಮುಂದೆ ಮಹಾಲಿಂಗಸ್ಥಲ.