Index   ವಚನ - 49    Search  
 
ನಿರೀಶ್ವರ ಸಾಂಖ್ಯ ಮೊದಲಾಗುಳ್ಳ ಪೂರ್ವೋಕ್ತವಹ ಸಮಸ್ತ ಸಿದ್ಧಾಂತ ಶಾಸ್ತ್ರಂಗಳಿಗೆ ವೇದವೇ ಮುಖ್ಯವು ಆ ವೇದಂಗಳನು ಒಳವಿಡಿದೆಯ್ದುವ ಕಾರಣವಾಗಿ ಸಾಂಖ್ಯಾದಿಯಾಗಿ ನಾಲ್ಕು ಸಿದ್ಧಾಂತ ಶಾಸ್ತ್ರಂಗಳಿಗೂ ಪ್ರಮಾಣವಹತನವು ಸರ್ವ ಶಾಸ್ತ್ರ ಪಾರಂಗತರಿಂದ ನಿಶ್ಚೈಸಲ್ಪಟ್ಟಿತ್ತಯ ಶಾಂತವೀರೇಶ್ವರಾ ಸೂತ್ರ: ಆ ಸಾಂಖ್ಯಾದಿಗಳ ದಸೆಯಿಂದ ಶಿವಾಗಮವು ವೇದಮಯವೆಂದು ತೋರಿಸುತಿರ್ದಪಂ. ನಿರೀಶ್ವರ ಸಾಂಖ್ಯ ಶಾಸ್ತ್ರಕ್ಕೆ ಯೋಗ ಶಾಸ್ತ್ರಕ್ಕೆ ಹಾಂಗೆಯೆ ವೈಷ್ಣವಾಗಮಕ್ಕೆಯು ಒಂದೆ ವೇದದ ಏಕ ದೇಶದಲ್ಲಿ ವರ್ತಿಸುವತನವು ಶಿವಾಗಮವು ವೇದದಲ್ಲಿ ತನ್ಮಯವಾಗಿ ಸನ್ಮತವದೆಂತೆಂದೊಡೆ: