ಕಪಿಲ ಮುನಿ ಪ್ರಣೀತವಾದ ನಿರೀಶ್ವರತ್ವವು
ಪತಂಜಲಿ ಪ್ರಣಿತವಾದ ಯೋಗಶಾಸ್ತ್ರವು
ವಾಸುದೇವ ಪ್ರಣೀತವಾದ ವೈಷ್ಣವಾಗಮವು
ಶಿವಪ್ರಣಿತವಾದ ಶಿವಾಗ[ಮ]ವು ಹಾಂಗೆಯೆ
‘ನಿಶ್ವಸಿತಮಸ್ಯ ವೇದ’ ಎಂಬ ಶ್ರುತಿಯುಂಟಾಗಿ
ಶಿವನ ನಿಶ್ವಾಸ ಮಾರುತ ಸಂಭವವಾದ
ವೇದಂಗಳು ಪ್ರಮಾಣಂಗಳಾಗಿರ್ದ
‘ಸಂಖ್ಯಯೋಗ ಪಶುಪತಿ ಮತಂ ವೈಷ್ಣವಮಿತಿ’ ಎಂದು ‘ಮಹಿಮ್ನಸ್ತವ’
ಈ ಸಿದ್ಧಾಂತಗಳು ತರ್ಕ ಯುಕ್ತಿಗಳಿಂದ ಕೆಡಲು ಯೋಗ್ಯಂಗಳವಲ್ಲವಯ್ಯ
ಶಾಂತವೀರೇಶ್ವರಾ
ಸೂತ್ರ: ಆ ಸಿದ್ಧಾಂತ ಬೇದಂಗಳೊಳಗೆ ವೇದ ಮುಖ್ಯವೆಂದು ತೋರುತಿರ್ದಪಂ.
Art
Manuscript
Music
Courtesy:
Transliteration
Kapila muni praṇītavāda nirīśvaratvavu
patan̄jali praṇitavāda yōgaśāstravu
vāsudēva praṇītavāda vaiṣṇavāgamavu
śivapraṇitavāda śivāga[ma]vu hāṅgeye
‘niśvasitamasya vēda’ emba śrutiyuṇṭāgi
śivana niśvāsa māruta sambhavavāda
vēdaṅgaḷu pramāṇaṅgaḷāgirda
‘saṅkhyayōga paśupati mataṁ vaiṣṇavamiti’ endu ‘mahimnastava’
ī sid'dhāntagaḷu tarka yuktigaḷinda keḍalu yōgyaṅgaḷavallavayya
śāntavīrēśvarā
sūtra: Ā sid'dhānta bēdaṅgaḷoḷage vēda mukhyavendu tōrutirdapaṁ.