Index   ವಚನ - 52    Search  
 
ಸೂತ್ರ: ಆ ಶಿವಾಗಮವು ಸರ್ವವೇದಾರ್ಥರೂಪವೆಂದು ಹೆಸರುಳ್ಳದೆಂದು ತೋರಿಸುತಿರ್ದಪಂ. ವಚನ: ಶಿವನು ಹೇಳಿರುವ ಕಾರಣ ಸಿದ್ಧಾಂತವೆಂಬ ಹೆಸರುಳ್ಳ ಶಿವಾಗಮವು ಸಮಸ್ತ ವೇದಾರ್ಥ ಹೆಸರುಳ್ಳ ಶಿವಾಗಮವು ಸಮಸ್ತ ವೇದಾರ್ಥ ಸ್ವರೂಪವಾದ ಕಾರಣವಾಗಿ ವೇದದೋಪಾದಿಯಲ್ಲಿ ಎಲ್ಲ ಕಾಲದಲ್ಲಿಯೂ ಪ್ರಮಾಣವೆಂದು ಹೇಳುತ್ತಾರೆ. ಅದೆಂತೆಂದೊಡೆ: ಸಾಕ್ಷಿ: “ಶೈವಂ ತಂತ್ರಮಿತಿ ಪ್ರೊಕ್ತಂ ಸಿದ್ಧಾಂತಾಖ್ಯಂ ಶಿವೋದಿತಂ| ಸರ್ವ ವೇದಾರ್ಥ ರೂಪಾತ್ವಾತ್ಪ್ರಮಾಣಂ ವೇದವತ್ಸದಾ||” ಎಂದುದಾಗಿ ಶಾಂತವೀರೇಶ್ವರಾ ಸೂತ್ರ: ಶಿವಾಗಮಂಗಳ ಭೇದವನು ತೋರಿಸುತಿರ್ದಪಂ.