ಸಿದ್ಧಾಂತವೆಂಬ ಹೆಸರುಳ್ಳ ಶಿವಾಗಮವು
ವೇದೋಕ್ತವಾದ ಧರ್ಮವನೆ ಹೇಳುವ ಕಾರಣವಾಗಿ
ವೇದಂಗಳಿಗೆ ಬಾಹ್ಯವಾದ ಜೈನ ಬೌದ್ಧ ಚಾರ್ವಾಕ ಮತಂಗಳಿಗೆ
ವಿರೋಧಿಯಾದ ಕಾರಣವಾಗಿ
ವೇದ ಸಮ್ಮತವೆಂದು ಹೇಳತ್ತಿರ್ಪುದು ಅದೆಂತೆಂದೊಡೆ:
ಸಾಕ್ಷಿ:
ವೇದ ಧರ್ಮಾಭಿದಾಯಿತ್ವ| ಸಿದ್ಧಾಂತಾಖ್ಯಃ ಶಿವಾಗಮ|||
ವೇದ ಧರ್ಮಾಭಿದಾಯಿತ್ವಃ ಶಿವಾಗಮಃ|
ವೇದ ಬಾಹ್ಯ ವಿರೋಧಿತ್ವಾ| ದ್ವೇದ ಸಮ್ಮತ ಉಚ್ಯತೆ|| ಎಂದುದಾಗಿ
ಶಾಂತವೀರೇಶ್ವರಾ
ಸೂತ್ರ: ಆ ಶಿವ ಪ್ರಣೀತವಾದ ವೇದ ಸಿದ್ಧಾಂತಗಳಿಗೆ ಕಾರಣ ಪೂರ್ವಕನಾಗಿ ಐಕ್ಯವನು ತೋರಿಸುತಿರ್ದಪಂ.