Index   ವಚನ - 69    Search  
 
ಶಿವಭಕ್ತರಲ್ಲಿ ಆರು ಕೆಲಂಬರು ಮನುಷ್ಯರು ಹೃದಯಕಲಮದ ಜ್ಞಾನಲಿಂಗಪೂಜೆಯಲ್ಲಿ ಪ್ರೀತಿಯುಳ್ಳವರು ಅವರುಗಳು ‘ವೀರಶೈವರು’. ಕರಕಮಲದ ಕ್ರಿಯಾಲಿಂಗಪೂಜೆಯಲ್ಲಿ ಪ್ರೀತಿಯುಳ್ಳವರು ‘ವೀರಮಾಹೇಶ್ವರ’ರೆಂದು ಭೂಮಿಯಲ್ಲಿ ಹೇಳುವರು. ಅದು ಕಾರಣವಾಗಿ ‘ವೀರಶೈವ’ರುಗಳಿಗೆ ಜ್ಞಾನಕಾಂಡವಾದ ಪ್ರಾಣಲಿಂಗಿ ಶರಣು ಶಿವೈಕ್ಯ ಸ್ಥಲೋಕ್ತಿಯಾದ ಧರ್ಮಂಗಳನು ಆಚರಿಸುತ್ತಿರುವುರು ವೀರಮಾಹೇಶ್ವರರು. ಹೊರೆಗೆ ಕರ್ಮಕಾಂಡವಾದ ಭಕ್ತ ಮಾಹೇಶ್ವರ ಪ್ರಸಾದಿ ಸ್ಥಲೋಕ್ತವಾದಾಚಾರಂಗಳನು ಮಾಡುತ್ತಿರುವರು.