ವೀರಮಾಹೇಶ್ವರರೆಂದು ಪ್ರಸಿದ್ಧವಾದ
ವೀರಶೈವರಾಯಿತ್ತಾದೊಡೆ
ಭಕ್ತಾದಿ ಶಿವೈಕ್ಯಾಂತವಾದ ವ್ಯವಹಾರದಿಂದವು
ಪಿಂಡಾದಿ ಜ್ಞಾನ ಶೂನ್ಯಾಂತವಾದ ಸ್ಥಲಚಾರ ಬೇದದ ದೆಸೆಯಿಂದೆಯು
ಆರು ಭೇದ ಉಳ್ಳವರೆಂದು
ಶಾಸ್ತ್ರ ಪಾರಂಗತರು ವಿವರಿಸುವರಯ್ಯ
ಶಾಂತವೀರೇಶ್ವರಾ
ಸೂತ್ರ: ಬಳಿಕಂ ವೀರಶೈವ ಭೇದವನು ತೋರಿಸುತಿರ್ದಪಂ.
Art
Manuscript
Music
Courtesy:
Transliteration
Vīramāhēśvararendu prasid'dhavāda
vīraśaivarāyittādoḍe
bhaktādi śivaikyāntavāda vyavahāradindavu
piṇḍādi jñāna śūn'yāntavāda sthalacāra bēdada deseyindeyu
āru bhēda uḷḷavarendu
śāstra pāraṅgataru vivarisuvarayya
śāntavīrēśvarā
sūtra: Baḷikaṁ vīraśaiva bhēdavanu tōrisutirdapaṁ.