ಅರಳಿಯ ಮರದ ಮೇಲೆ,
ಒಂದು ಹಂಸೆ ಗೂಡನ್ನಿಕ್ಕಿತ್ತ ಕಂಡೆ.
ಆ ಗೂಡಿನೊಳಗೆ,
ಒಬ್ಬ ಹೆಂಗೂಸು ಉಯ್ಯಾಲೆಯಾಡುತ್ತಿರ್ದಳು.
ಉಯ್ಯಾಲೆ ಹರಿದು,
ಹೆಂಗೂಸು ನೆಲಕ್ಕೆ ಬಿದ್ದು ಸತ್ತಡೆ,
ಪ್ರಾಣಲಿಂಗವ ಕಾಣಬಹುದು ಕಾಣಾ ಗುಹೇಶ್ವರಾ.
Transliteration Araḷiya marada mēle,
ondu hanse gūḍannikkitta kaṇḍe.
Ā gūḍinoḷage,
obba heṅgūsu uyyāleyāḍuttirdaḷu.
Uyyāle haridu,
heṅgūsu nelakke biddu sattaḍe,
prāṇaliṅgava kāṇabahudu kāṇā guhēśvarā.
Hindi Translation अश्वत्थ वृक्षपर एक हंस ने घोंसला बनाया देखा।
उस घोंसले में एक स्त्री झूला झूल रही थी !
झूला कटकर स्त्री धरती पर गिर मरी तो,
प्राणलिंग देख सकते है देखो गुहेश्वरा।
Translated by: Eswara Sharma M and Govindarao B N
Tamil Translation அரச மரத்தின் மீது ஒரு அன்னம் கூடு கட்டியதைக் கண்டேன்
அந்தக் கூட்டிலே ஒரு பெண் ஊஞ்சலாடிக் கொண்டிருந்தாள்
ஊஞ்சல் உடைந்து, பெண் நிலத்தில் வீழ்ந்து மடிந்தால்
பிராணலிங்கத்தைக் காணவியலும் காணாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಳಿಯ ಮರ = ಅಶ್ವತ್ಥ ವೃಕ್ಷ, ನಶ್ವರತೆಯ ಸಂಕೇತ; ದೇಹ; ಉಯ್ಯಲೆ = ಜೋಕಾಲಿ, ತೂಗುಮಂಚ; ಕರ್ಮ ಹಾಗೂ ವಾಸನೆಗಳ ಸಂಕೇತವಾದುದು; ಗೂಡು = ಆ ಜೀವನ ನಿಲಯವಾದ ಮನಸ್ಸು; ಹಂಸೆ = ಜೀವ; ಹೆಂಗೂಸು = ಸ್ತ್ರೀ. ಮಾಯೆ; ಅವಳದು ಮೋಹಕ ರೂಪು;
Written by: Sri Siddeswara Swamiji, Vijayapura