ಈ ಪ್ರಕಾರ ವೈದಿಕರು ಹೇಳಲು ಏನು ಕಾರಣವೆಂದರೆ,
ನಾನೆಂಬ ತೋರಿಕೆಯಿಂದ ಅರಿಯಲು ಯೋಗ್ಯನಾದ ಕಾರಣನಾಗಿ
ಅನುಭವಿಸಿದ ವಿಷಯಂಗಳ ಸ್ಮರಣೆಯು ತಾನಾದ ಕಾರಣವಾಗಿ
ಆ ವೈದಿಕರು ಹೇಳುವರು.
ದೇಹೇಂದ್ರಿಯ ಬುದ್ಧಿ ತತ್ತ್ವಂಗಳ ದೆಸೆಯಿಂದ ಭಿನ್ನವಾಗಿ ಕೇಡಿಲ್ಲದಿರ್ದ
ಪಿಂಡ ಶಬ್ದವಾದಾತ್ಮನು ಆವನಾನೊಬ್ಬ ವಿವೇಕಿ ಉಂಟು,
ಆತನು ಪಿಂಡಜ್ಞಾನಿ ಎಂದು ಹೇಳವರಯ್ಯ
ಶಾಂತವೀರೇಶ್ವರಾ
ಪಿಂಡಜ್ಞಾನ ಸ್ಥಲಕ್ಕೆ ಪೂರ್ವೋಕ್ತ ವಚನ 68ಕ್ಕಂ ಸಂಪೂರ್ಣ
ಸಂಸಾರ ಹೇಯಸ್ಥಲ
ಸೂತ್ರ: ಈ ಪ್ರಕಾರವಾದ ಪಿಂಡಜ್ಞಾನವುಳ್ಳ ಮಹಾತ್ಮನು ಅಂಗತತ್ತ್ವ ಲಿಂಗತತ್ತ್ವ ಸ್ವರೂಪವನು ಲೇಸಾಗಿ ವಿಚಾರಿಸಿ ಆ ಎರಡರೊಳಗೆ ಕಲೆಯೊಡನೆ ಕೂಡಿದ ಜೀವಾತ್ಮ ರೂಪವಾದ ಸಂಸಾದಕ್ಕೆ ಹೇಯುತ್ವದ ಬುದ್ಧಿ ಉಂಟಾಗಲು ಮುಂದೆ ಸಂಸಾರ ಹೇಯಸ್ಥಲವಾದುದು.