Index   ವಚನ - 91    Search  
 
ಸದಾನಂದ ಸ್ವರೂಪವೆಂಬ ಬೇರನುಳ್ಳ ದಶವಿಧ ಕಲ್ಯಾಣ ಗುಣವೆಂಬ ತಳಿರನುಳ್ಳ ಶಿವಾದಿ ಪೃಥ್ವ್ಯಾಂತವಾದ ತತ್ವ್ವಗಳೆಂಬ ಶಾಖೋಪಶಾಖೆಗಳನುಳ್ಳ ಉಪನಿಷತ್ತುಗಳೆಂಬ ಸಮಗಳನುಳ್ಳ ಸರ್ವ ವ್ಯಾಪಕತ್ವವೆಂಬ ರಸವೆ ಮೊದಲಾಗಿ ತುಂಬಿದ ಮೋಕ್ಷ ಫಲವುಳ್ಳಂಥಾ ಇಂಥ ಶಿವ ಕಲ್ಪವೃಕ್ಷವನು ಬಿಟ್ಟು ಎಲೆ ಮಾನವೆಂಬ ಪಕ್ಷಿಯೆ ಇದೇನು ಮಾಡುತ್ತಿದ್ದೇನೆ? ಸಾಕ್ಷಿ : ವೃತ್ತ: ಆನಂದ ಮೂಲ ಗುಣ ಪಲ್ಲವ ತತ್ತ್ವ ಶಾಖಂ ವೇದಾಂತ ಪುಷ್ಪಫಲ ಮೋಕ್ಷ ರಸಾದಿ ಪೂರ್ಣಂ ಚೇತೋ ವಿಹಂಗ ಶಿವಕಲ್ಪತರುಃ ವಿಹಾರಯೌ| ಸಂಸಾರ ಶುಷ್ಕ ವಿಟಪೇ| ಕಿಮಿದಂ ಕರೋಪಿ’ ಇಂತೆಂದುದಾಗಿ, ಈ ಏಕೋತ್ತರ ಶತಸ್ಥಲದಲ್ಲಿ ಸೇರಿದ ಗ್ರಂಥ ವೃತ್ತಗಳಿಗೆ ಈ ಪೂರ್ವೋಕ್ತವಾದ ವಚನಂಗಳ ಅರ್ಥವಲ್ಲದೆ ಮತ್ತೊಂದರ್ಥವ ಮಾಡಲಾಗದಯ್ಯ ಶಾಂತವೀರೇಶ್ವರಾ ಸೂತ್ರ: ಇನ್ನು ಸಂಸಾರವೆಂಬ ವೃಕ್ಷ ಸ್ವರೂಪವೆಂತೆಂದೊಡೆ ಪೇಳ್ವೆಂ.