Index   ವಚನ - 94    Search  
 
ಪಂಚಾಕ್ಷರವೆಂಬ ಅಮೃತವ ಸ್ಪಂದಿಸುವುದಕ್ಕೆ ಅನುಕೂಲವಾದ ಎಲೆ ಜಿಹ್ವೆಯೆ, ರಾಜರುಗಳಲ್ಲಿಯ ದುರಾಸೆಯಿಂದ ದೂರವಿರು. ಉದಾಸೀನದ ದೆಸೆಯಿಂದ ಕರ್ಣಪುಟದಲ್ಲಿ ಎಡೆದೆರೆಹಿಲ್ಲದಾದ ಯಮನ ಕೋಣನ ಕೊರಳ ಘಂಟೆಯ ಘಣ ಘಣ ಧ್ವನಿಯ ಕಿವಿಯ ಹೋಗುವುದಕ್ಕೆಯು ಮುನ್ನಾ ಪರಬ್ರಹ್ಮ ವಿಷಯವಾದ ಪದವನು ಪರಿಚಯ ಮಾಡಿಕೊ! ‘ಡಿಂಡಿಮಾ ಜನಾಃ’ ಎಂದರೆ ವಾಚಾಳಕೆ ಜನರು ‘ಸತ್ತಾತನ ಮುಂದೆ ಡಂಗುರ ಬಾರಿಸುವರು, ‘ಹುಟ್ಟಿದವರಿಗೆ ಸಾವು ನಿಶ್ಚಯವು’ ಹೀಗೆಂದು ಸರ್ವರೂ ಬೋಧಿಸುತ್ತಿಹರು ಶೀಘ್ರದಲ್ಲಿ ಆತ್ಮಂಗೆ ಹಿತವಾದ ಮೋಕ್ಷ ಸಾಧನವಾದ ಪೂಜಾದಿ ಕಾರ್ಯಂಗಳನು ಮಾಡರಯ್ಯ [ಶಾಂತವೀರೇಶ್ವರಾ]