Index   ವಚನ - 96    Search  
 
ಆ ಪರಬ್ರಹ್ಮದ ಸಾಕ್ಷಾತ್ಕಾರಕ್ಕೋಸ್ಕರ ಆ ಶಿಷ್ಯನು ಶುಶ್ರೂಷಾಯುಕ್ತನಾಗಿ ಸರ್ವಶಾಸ್ತ್ರಂಗಳ ಬಲ್ಲಂಥ ಪರಬ್ರಹ್ಮದಲ್ಲಿ ನಿಲುಗಡೆಯುಳ್ಳಂಥ ಗುರುವನೆ ಆಶ್ರಯಿಸುವುದಯ್ಯ ಶಾಂತವೀರೇಶ್ವರಾ ಸೂತ್ರ: ಗ್ರಂಥ: “ಅಲ್ಪಾಕ್ಷರಮಸಂದಿಗ್ಧ| ಸಾರವದ್ವಿಶ್ವತೋ ಮುಖಂ ಅಸ್ತೋಭಮನವದ್ಯಂ ಚ| ಸೂತ್ರ ವಿದೋವಿದುಃ|| ಎಂದು ಈ ಪ್ರಕಾರವಾದ ಸಂಸಾರದಲ್ಲಿಯ ಹೇವರಿಕೆಯ ತರುವಾಯದಲ್ಲಿ ಗುರೂಪದೇಶವಿಲ್ಲದೆ ತನ್ನ ಸ್ವರೂಪಜ್ಞಾನ ಸಂಭವವಿಲ್ಲದ ಕಾರಣ ಗುರುವನ್ನು ಸಮೀಪಿಸುವುದು, ಮುಂದೆ ಗುರುಕಾರುಣ್ಯ ಸ್ಥಲದ ವಚನ.