Index   ವಚನ - 97    Search  
 
ಸಂಸಾರ ಹೇಯ ಸ್ಥಲವನು ಹೇಳಿದ ನಂತರದಲ್ಲಿ ನಿರ್ಮಲಾಣತಃಕರಣವುಳ್ಳ ಪಿಂಡಾಶಬ್ದ ವಾಚ್ಯವಾಗಿ ಶರೀರಾತ್ಮ ವಿವೇಕ ರೂಪವಾದ ಪಿಂಡಜ್ಞಾನ ಸಂಪನ್ನನಾಗಿ ಕ್ಷಣಿಕವಾದ ಸಂಸಾರ ಸುಖದಲ್ಲಿ ವಿರತನಾಗಿ ಸಂಸಾರ ಹೇಯ ಉಳ್ಳಾತನು ಸಮಸ್ತ ಸಂಸಾರ ದೋಷವನು ವಿನಾಶವ ಮಾಡುತ್ತಿರ್ದನು. ಪರಬ್ರಹ್ಮ ಪರಶಿವ ವಾಚ್ಯವಾದ ಮಹಾಲಿಂಗವನು ಅರಿಯಲು ಶ್ರೀ ಗುರುಸ್ವಾಮಿಯನು ಬಳಿವಿಡಿದೆಯ್ದತ್ತಿರ್ದನಯ್ಯ ಶಾಂತವೀರೇಶ್ವರಾ