ಮೊದಲಲ್ಲಿ ವಿಭೂತಿಯ ಪಟ್ಟಧಾರಣವನು
ಸ್ಥಾನವನು ಮೀರದೆ ವಿಧಿಯನು ಮೀರದೆ ಮಾಡಿ
ಈಶಾನಾದಿ ಪಂಚಬ್ರಹ್ಮ ಸ್ವರೂಪವಾಗಿ ಆ ಮಂಡಲದಲ್ಲಿ ಇರಿಸಿ
ಪಂಚಾಕ್ಷರಾತ್ಮಕವಾದ ಪಂಚ ಕಲಶೋದಕಂಗಳಿಂದೆ
ಭುವನ ಪ್ರಸಿದ್ಧರಾದ ಪಂಚಾಚಾರ್ಯರೊಡನೆ ಕೂಡಿ,
ಆ ಪಂಚಾಚಾರ್ಯರ ಪುತ್ರ ಸಂಪ್ರದಾಯ
ಶಿಷ್ಯ ಸಂಪ್ರದಾಯದಲ್ಲಿಯ ಆಚಾರ್ಯ
ಪಟ್ಟ ಯೋಗ್ಯನಾದಾಚಾರ್ಯನು
ತನ್ನ ವಾಮ ಭಾಗದಲ್ಲಿ ಕುಳಿತ ಶಿಷ್ಯನನು
ಮೂರು ಬಾರಿ ಸಿಂಚಿಸೂದಯ್ಯ ಶಾಂತವೀರೇಶ್ವರಾ