Index   ವಚನ - 110    Search  
 
ಬಳಿಕ ದೀಕ್ಷೆಯನು ಪಂಚಸೂತ್ರಗಳಿಂದ ಹೇಳುವನು, ಅದೆಂತೆಂದೊಡೆ; ಕಾರ್ತೀಕಾ ಮಾಸದಲ್ಲಿ ದೀಕ್ಷೆಯಾದ ಶಿಷ್ಯಂಗೆ ತವನಿಧಿವಹುದು ವೈಶಾಖ ಮಾಸದಲ್ಲಿ ದೀಕ್ಷೆಯಾದ ಶಿಷ್ಯಂಗೆ ಸಂಪದವಹದು ಜೇಷ್ಠದಲ್ಲಿ ದೀಕ್ಷೆಯಾದ ಶಿಷ್ಯಂಗೆ ಪುತ್ರಲಾಭವಹುದು ಶ್ರಾವಣದಲ್ಲಿ ದೀಕ್ಷೆಯಾದ ಶಿಷ್ಯಂಗೆ ಆಯುಷ್ಯವಹುದು ಆಶ್ವೀಜದಲ್ಲಿ ಧನಲಾಭವಹುದು ಮಾರ್ಗಶಿರದಲ್ಲಿ ರಾಜ್ಯವಹುದು ಪುಷ್ಯದಲ್ಲಿ ಜ್ಞಾನ ನಾಶವಹುದು, ಮಾಘ ಮಾಸದಲ್ಲಿ ರತ್ನಲಾಭವಹುದು ಚೈತ್ರದಲ್ಲಿ ಬಹು ದುಃಖವಹುದು, ಅಷಾಢದಲ್ಲಿ ವ್ಯಾಧಿಯಹುದು. ಭಾದ್ರಪದದಲ್ಲಿ ಮರಣವಹುದು, ಫಾಲ್ಗುಣದಲ್ಲಿ ಧನ ಹಾನಿಯಹುದು, ಭದ್ರ ಜಯಾದಿ ಶುಭ ತಿಥಿಯಲ್ಲಿ ಸೋಮಶುಕ್ರಾದಿ ಶುಭದಿನಗಳಲ್ಲಿ ಅಮೃತ ಘಳಿಗೆಯೊಡನೆ ಕೂಡಿದ ಶುಭ ಮುಹೂರ್ತದಲ್ಲಿ ಶಿವಭಕ್ತಿರಿಗೆ ವೀಳೆಯ ವಿಭೂತಿಯನ್ನು ಕೊಟ್ಟು ಆಚಾರ್ಯನು, ಸ್ನಾನವ ಮಾಡಿ ಶುಭ್ರ ವಸ್ತ್ರವನು ಹೊಂದಿರ್ದ ದಂತಧಾವನೆ ಮೊದಲಾಗುಳ್ಳ ಶಿಷ್ಯನನು ವಿದ್ಯುಕ್ತ ಕ್ರಮವನು ಮೀರದೆ ಶಾಸ್ತ್ರೋಕ್ತ ಕ್ರಮವನು ಮೀರದೆ ಸಮೀಪಕ್ಕೆ ಕರೆಸಿಕೊಂಡ ಮೂಡಣ ಮುಖವಾದ ಆ ಶಿಷ್ಯನನು ಬಡಗ ಮುಖವಾದ ಆಚಾರ್ಯನು ಸ್ವಸ್ತಿಕಾ ಮಂಡಲದಲ್ಲಿ ಕುಳ್ಳರಿಸೂದು ‘ಅಪಿವಾಯಶ್ವಾಂಡಾಲಃ| ಶಿವೇತಿ ವಾಚಂ ವದಿತ್ತೇನ| ಸಹ ಸಂವಿಸಿತ್ತೇನ| ಸಹಸಂವರರ್ಧಿತ್ತೇನ ಸಹ ಸವಿಸಿತ್ತೇನ| ಸಹ ಭುಂಜಿತ| ತೇನ ಸಹ ಭುಂಜಿತ’ ಎಂದು ಶ್ರುತಿ ಮಂತ್ರ ಪ್ರಸಿದ್ಧವಾದ ಶಿವನಾಮೋಚ್ಚಾರಣವನ್ನು ಶಿವಧ್ಯಾನವನು ಮಾಡಿಸೂದಯ್ಯ ಶಾಂತವೀರೇಶ್ವರಾ