Index   ವಚನ - 113    Search  
 
ಈ ಪಂಚಾಕ್ಷರಿ ಮಂತ್ರ ಸ್ವರೂಪವನು ಛಂದಸ್ಸನು ಮಂತ್ರಪ್ರಸಿದ್ಧನಾದ ಋಷಿಯು ದೇವತಾನ್ಯಾಸಗಳಾದ ಪಂಚಬ್ರಹ್ಮ ಪಂಚಸಾದಾಖ್ಯವೆಂಬ ಪರ್ಯಾಯ ನಾಮವುಳ್ಳಾಚಾರ್ಯರಾದಿ ಪಂಚ ಲಿಂಗಗಳ, ಕರಾಂಗ ದೇಹನ್ಯಾಸಂಗಳ ಮಾರ್ಗವನುಪದೇಶಿಸುವುದು. ಆಜ್ಞಾ ಚಕ್ರದಲ್ಲಿ ಓಂಕಾರವೆಂಬ ಬೀಜವಾಗುಳ್ಳ ಮಹಾಲಿಂಗವನು ಕರಸ್ಥಲಕ್ಕೆ ಕೊಡುವ ಮೊದಲು ಆಧಾರಾದಿ ಪಂಚ ಚಕ್ರಂಗಳಲ್ಲಿ ನಕಾರಾದಿ ಪಂಚಾಕ್ಷರಗಳೆ ಬೀಜವಾಗುಳ್ಳ ಆಚಾರಾದಿ ಪಂಚ ಲಿಂಗಂಗಳನು ಶಿವಾಗಮೋಕ್ತವಾಗಿ ಉಪದೇಶಿಸುವದೆಂಬುದರ್ಥವಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಗುರುಕಾರುಣ್ಯನ ಪಡೆದಂಥ ಮಹಾತ್ಮಂಗೆ ಪಂಚಭೂತಂಗಳ ಸ್ವರೂಪವಾದ ಸ್ಥೂಲ ದೇಹ ಧರ್ಮಂಗಳನು ಪರಿಹಾರಿಸಿ ಸದಾಚರಕ್ಕೆ ಸಾಧನವಾದ ದೇಹದ ಮೇಲೆ ಲಿಂಗಧಾರಣವ ಮಾಡಲಾಗಿ ಮುಂದೆ ಲಿಂಗಧಾರಣಸ್ಥಲವಾಯಿತ್ತು.