ಶಿವಕಲಾ ಪೂರಿತವಾದ ಲಿಂಗದಲ್ಲಿ
ಶಿಷ್ಯನು ಜೀವಕಲೆಯಾದ ಪ್ರಾಣವನು ಪ್ರತಿಷ್ಠಿಸುವದು.
ಆ ಶಿವಕಲಾ ಪೂರಿತವಾದ ಲಿಂಗವನು
ಆ ಶಿಷ್ಯನು ಪ್ರಣವ ಸ್ವರೂಪವಾಗಿ ಜೀವಕಲೆಯಾದ ಪ್ರಾಣದಲ್ಲಿ
ಐಕ್ಯ ಸ್ವರೂಪಿನಿಂದ ಆಚಾರ್ಯವನು ಪ್ರತಿಷ್ಠಿಸುವುದು,
ಆ ಪ್ರಕಾರದಿಂದ ಲಿಂಗವನು
ಜೀವಕಲೆಗಳಿಂದ ಸಮರಸವ ಮಾಡಿ
ಶಿಷ್ಯನು ಹಸ್ತಪೀಠದಲಿ ಇರಿಸುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivakalā pūritavāda liṅgadalli
śiṣyanu jīvakaleyāda prāṇavanu pratiṣṭhisuvadu.
Ā śivakalā pūritavāda liṅgavanu
ā śiṣyanu praṇava svarūpavāgi jīvakaleyāda prāṇadalli
aikya svarūpininda ācāryavanu pratiṣṭhisuvudu,
ā prakāradinda liṅgavanu
jīvakalegaḷinda samarasava māḍi
śiṣyanu hastapīṭhadali irisuvudayya
śāntavīrēśvarā