Index   ವಚನ - 133    Search  
 
ಮತ್ತಮಾ ಲಿಂಗಂ ಶಿರಸ್ಸು ನಾಳವು ಗೋಮುಖವು ಕಟಿಯು ಅರ್ಧಬಟುವು ಹೀಂಗ ಆರು ಸ್ಥಲಂಗಳಲ್ಲಿ ಒಡೆದೊಡೆ ಆ ಲಿಂಗವನು ಧರಿಸಲಾಗದು ಹಾಂಗಾದರೆಯೂ ಧರಿಸಿಕೊಂಡೊಡೆ ರೌರವ ನರಕವನೆಯ್ದುವನಯ್ಯ ಶಾಂತವೀರೇಶ್ವರಾ