ಮರಳಿ ಶುದ್ಧಶೈವನ ಇಷ್ಟಲಿಂಗ ಪತನವಾದೊಡಂ,
ಕೆಟ್ಟೊಡಂ ದಗ್ಧವಾದೊಡಂ
ಚೋರರಿಂ ಅಪಹರಿಸಲಾದದೊಡಂ, ಮೂಷಕಂ,
ಕಾಕ ಶುನಕ ವಾನರಂಗಳಿಂ ಕೊಂಡು ಪೋದೊಡಂ,
ಅಘೋರ ಮಂತ್ರವನು ಒಂದು ಲಕ್ಷ ಜಪ ಮಾಡಿ
ಶಾಸ್ತ್ರವಿಧಾನದಿಂದ ಆಚಾರ್ಯರಿಂದಪೂರ್ವ ಪ್ರಕಾರದಿಂದಮೆ
ಪ್ರತಿಷ್ಠಿಸಿಕೊಂಡು ಲಿಂಗಸಿದ್ಧಿಯನೈಯ್ದಿ ಪೂಜಿಸುವುದು.
ಪೀಠಕೆಯಲ್ಲಿ ಈ ಪ್ರಕಾರವೆ ಮಾಡುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Maraḷi śud'dhaśaivana iṣṭaliṅga patanavādoḍaṁ,
keṭṭoḍaṁ dagdhavādoḍaṁ
cōrariṁ apaharisalādadoḍaṁ, mūṣakaṁ,
kāka śunaka vānaraṅgaḷiṁ koṇḍu pōdoḍaṁ,
aghōra mantravanu ondu lakṣa japa māḍi
śāstravidhānadinda ācāryarindapūrva prakāradindame
pratiṣṭhisikoṇḍu liṅgasid'dhiyanaiydi pūjisuvudu.
Pīṭhakeyalli ī prakārave māḍuvudayya
śāntavīrēśvarā