Index   ವಚನ - 161    Search  
 
ಆ ಸದಾಶಿವನ ಸದ್ಯೋಜಾತಮುಖದಿಂದ ಪೃಥ್ವಿ ಹುಟ್ಟಿತ್ತು. ಆ ಪೃಥ್ವಿಯಿಂದ ನಿವೃತ್ತಿ ಕಲೆ ಪುಟ್ಟಿತ್ತು. ಆ ಕಲೆಯಿಂದ ಕಪಿಲವರ್ಣದ ನಂದೆ ಎಂಬ ಧೇನು ಹುಟ್ಟಿತ್ತು. ವಾಮದೇವಮುಖದಿಂದ ಉದಕಂ ಪುಟ್ಟಿತ್ತು. ಆ ಉದಕದಿಂದ ಪ್ರತಿಷ್ಠೆ ಎಂಬ ಕಲೆ ಪುಟ್ಟಿತ್ತು. ಆ ಕಲೆಯಿಂದ ಕೃಷ್ಣ ವರ್ಣದ ಭದ್ರೆ ಎಂಬ ಧೇನು ಹುಟ್ಟಿತ್ತು. ಆ ಧೇನುವಿನ ಗೋಮಯದಿಂದ ‘ಭಸಿತ’ ಹುಟ್ಟಿತ್ತು. ಅಘೋರ ಮುಖ್ಯದಿಂದ ಅಗ್ನಿ ಪುಟ್ಟಿತ್ತು. ಆ ಕಲೆಯಿಂದ ರಕ್ತ ವರ್ಣದ ಸುರಭಿ ಹುಟ್ಟಿತ್ತು. ಆ ಧೇನುವಿನ ಗೋಮಯದಿಂದ ‘ಭಸ್ಮ’ ಹುಟ್ಟಿತ್ತು. ಆ ಶಿವನ ತತ್ಪುರುಷಮುಖದಿಂದ ವಾಯು ಪುಟ್ಟಿತ್ತು. ಅದರಿಂದ ಶಾಂತಿಕಳೆ ಪುಟ್ಟಿತ್ತು. ಆ ಕಲೆಯಿಂದ ಧವಳ ವರ್ಣದ ಸುಶೀಲೆ ಎಂಬ ಧೇನು ಪುಟ್ಟಿತ್ತು. ಆ ಧೇನುವಿನ ಗೊಮಯದಿಂದ ‘ಕ್ಷಾರ’ ಪುಟ್ಟಿತ್ತು. ಈಶಾನಮುಖದಿಂದ ಆಕಾಶ ಪುಟ್ಟಿತ್ತು. ಅದರಿಂದ ಶಾಂತ್ಯಾತೀತ ಕಲೆ ಪುಟ್ಟಿತ್ತು. ಆ ಕಲೆಯಿಂದ ಚಿತ್ತ ವರ್ಣದ ಸುಮನೆ ಎಂಬ ಧೇನು ಪುಟ್ಟಿತ್ತು. ಆ ಧೇನುವಿನ ಗೋಮಯದಿಂದ ‘ರಕ್ಷೆ’ ಪುಟ್ಟಿತ್ತಯ್ಯ ಶಾಂತವೀರೇಶ್ವರಾ