Index   ವಚನ - 162    Search  
 
ಬಳಿಕ ಕಾರಣಂಗಳನು ಅನ್ವರ್ಥನಾಮವ ಮಾಡಿ ಪೇಳುತ್ತಿರ್ದಪನು, ಅಣಿಮಾದೈಶ್ವರ್ಯಕ್ಕೆ ‘ವಿಭೂತಿ’ಯು ಕಾರಣ, ಶಿವತತ್ತ್ವವನು ಪ್ರಕಾಶಿಸಲು ‘ಭಸಿತ’ ಕಾರಣ, ಮನೋವಾಕ್ಕಾಯ ಜನ್ಯವಾದ ಪಾತಕಗಳ ನಾಶಕ್ಕೆ ‘ಭಸ್ಮ’ ಕಾರಣ, ತಾಪತ್ರಯದಿಂದಾದ ವಿಪತ್ತುಗಳ ನಾಶಕ್ಕೆ[ಕಾರಣ] ‘ಕ್ಷಾರ’, ಸಮಸ್ತ ಪ್ರಾಣಿಗಳ ರಕ್ಷೆಗೆ ಕಾರಣ ‘ರಕ್ಷೆ’ ಎಂದು ಹೇಳುವರಯ್ಯ ಶಾಂತವೀರೇಶ್ವರಾ