Index   ವಚನ - 165    Search  
 
ಶಾಸ್ತ್ರೋಕ್ತ ಪ್ರಕಾರವನು ಮೀರದೆ ನಂದಾದಿ ಗೋವುಗಳಲ್ಲಿ ಹುಟ್ಟಿದ ಹೊಸತಾದಘೋರಮಂತ್ರದಿಂದ ಶಿವಮಂತ್ರದಿಂದ ಸಂಸ್ಕರಿಸಿ ಅಗ್ನಿಯಿಂದ ಸುಡುವದು, ಈಶನ ಮಂತ್ರದಿಂದೆ ಬಿಲ್ವಾದಿ ಪತ್ರೆಯಲ್ಲಿರಿಸಿದ ಆ ಭಸ್ಮವು ‘ಕಲ್ಪ’ ಭಸ್ಮವೆಂದು ಅರಿಯಲು ಯೋಗ್ಯವು. ಅರಣ್ಯದಲ್ಲಿರುವ ಒಣಗಿದ ಬೆರಣಿಯನು ಪುಡಿಮಾಡಿ ಸುಟ್ಟು ಭಸ್ಮವೆ ‘ಅನುಕುಲ್ಪ’ ಭಸ್ಮವು. ಅಂಗಡಿ ಸಂತೆಯಲ್ಲಿ ದೊರೆಯುವ ಭಸ್ಮವ ವಸ್ತ್ರದಿಂದ ಶೋಧಿಸಿ ಗೋಮುತ್ರದಲ್ಲಿ ಕಲಸಿ ಮುದ್ದೆಯಮಾಡಿ, ಸುಟ್ಟ ಭಸ್ಮವು ‘ಉಪಕಲ್ಪ’ ಭಸ್ಮವಹುದಯ್ಯ. ಉಳಿದ ರೀತಿಯಲ್ಲಿ ಸಂಪಾದಿಸಿದ ಭಸ್ಮವ ‘ಅಕಲ್ಪ’ವೆಂದು ಹೇಳುವರಯ್ಯ ಶಾಂತವೀರೇಶ್ವರಾ