ಬಳಿಕ, ಭಸ್ಮಸ್ನಾನೋತ್ಕರ್ಷವನು
ಸೂತ್ರತ್ರಯದಿಂದ ಪೇಳುತ್ತಿರ್ದಪನು:
ಭಸ್ಮದಿಂದೆ ಮಾಡಿದ ಸ್ನಾನವು ಶ್ರೇಷ್ಠವಾದ ಅಗ್ನಿಯ ಸ್ನಾನವು
ಗಂಗೋದಕಾದಿ ಸ್ನಾನವು ಸರ್ವಾತ್ಮಕ ಮಲಾಪಹಾರಿ,
ದಿವಸ ಪ್ರತಿ ದಿವಸ ಶಾಸ್ತ್ರೋಕ್ತವಾಗಿ ಮಾಡುವ ಭಸ್ಮ ಸ್ನಾನವು
ಪುರುಷರ ಬಾಹ್ಯ ದೋಷವನು ಪರಿಹರಿಸುತ್ತದೆ.
ಜಲಸ್ನಾನಗಳಿಗಿಂತ ಭಸ್ಮದ ಸ್ನಾನವು ಅಗ್ನಿಸ್ನಾನವೆಂದು
ಯೋಗೀಶ್ವರರು ವಿಧಿಸಿರುವರು.
ಜಲಸ್ನಾನದಲ್ಲಿ ಪ್ರಾಣಿಹಿಂಸೆ ನಿಶ್ಚಯವು
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Baḷika, bhasmasnānōtkarṣavanu
sūtratrayadinda pēḷuttirdapanu:
Bhasmadinde māḍida snānavu śrēṣṭhavāda agniya snānavu
gaṅgōdakādi snānavu sarvātmaka malāpahāri,
divasa prati divasa śāstrōktavāgi māḍuva bhasma snānavu
puruṣara bāhya dōṣavanu pariharisuttade.
Jalasnānagaḷiginta bhasmada snānavu agnisnānavendu
yōgīśvararu vidhisiruvaru.
Jalasnānadalli prāṇihinse niścayavu
śāntavīrēśvarā