Index   ವಚನ - 175    Search  
 
ಭಸ್ಮಸ್ನಾನವ ಮಾಡುವ ಕಾಲದಲ್ಲಿ, ಹಸ್ತಪಾದಗಳನು ನಿರ್ಮಲೋದಕದಿಂದ ತೊಳೆದು, ಮೌನಿಯಾಗಿ ಭಸ್ಮವನು ವಾಮಹಸ್ತದಲ್ಲಿರಿಸಿ ದಕ್ಷಿಣ ಹಸ್ತದಿಂದೆ ಮುಚ್ಚಿಕೊಂಡು, ಬಲದ ತೊಡೆಯ ಮೇಲಿರಿಸಿಕೊಂಡು ಎಂಟು ಬಾರಿ ಓಂಕಾರ ಮಂತ್ರದಿಂದ ಭಸ್ಮವನು ಅಭಿಮಂತ್ರಿಸಿಕೊಂಡು, ‘ಓಂ ಈಶಾನಂ ಸರ್ವ ವಿದ್ಯಾನಾಂ’ ಎಂಬ ಈಶಾನ ಮಂತ್ರದಿಂದ ಶಿರಸ್ಸನ್ನು ಕೂರ್ತು ತಳಿವುದು. ‘ಓಂ ತತ್ಪುರುಷಾಯ ವಿದ್ಮಹೆ’ ಎಂಬ ತತ್ಪುರುಷ ಮಂತ್ರದಿಂದೆ ಮುಖವನು ಕೂರ್ತು ಹಾಂಗೆಯೆ ತಳಿವುದು. ‘ಓಂ ಅಘೋರೇಭೋ’ ಎಂಬ ಅಘೋರ ಮಂತ್ರದಿಂದ ಹೃದಯ ಸ್ಥಾನವನು ತಳಿವುದು, ‘ಓಂ ವಾಮದೇವಾಯ ನಮಃ” ಎಂಬ ವಾಮದೇವ ಮಂತ್ರದಿಂದ ಗುದ ಸ್ಥಾನವನು ತಳಿವುದು, ‘ಓ ಸದ್ಯೋಜಾತಂ ಪ್ರಪದ್ಯಾಮಿ’ ಎಂಬ ಸದ್ಯೋಜಾತ ಮಂತ್ರದಿಂದೆ ಪಾದಂಗಳನು ತಳಿವುದು, ‘ಓಂ’ ಎಂಬ ಪ್ರಣವ ಮಂತ್ರದಿಂದೆ ಸರ್ವಾಂಗವನು ಭಸ್ಮದಿಂದ ತಳಿವುದಯ್ಯ ಶಾಂತವೀರೇಶ್ವರಾ