Index   ವಚನ - 210    Search  
 
ಅವನಾವನೊಬ್ಬ ಬ್ರಾಹ್ಮಣನು, ನಿತ್ಯ ಕರ್ಮಂಗಳನು, ನೈಮಿತ್ಯಕ ಕರ್ಮಂಗಳನು, ಕಾಮ್ಯ ಕರ್ಮಂಗಳನು ಪ್ರಾಯಶ್ಚಿತ್ತಾದಿಯಾಗಿ ಉಳಿದ ಸಮಸ್ತ ಕರ್ಮಂಗಳನು ಎಲ್ಲ ಕಾಲದಲ್ಲಿ ಮಾಡುತ್ತಿದ್ದನಾದರೂ ಭಸ್ಮ ರುದ್ರಾಕ್ಷೆಯನು ಧರಿಸದೆ ಇದ್ದಾತನಿಗೆ ನಿತ್ಯ ಕರ್ಮಾಧಿಗಳಿಂದಾದ ಫಲಪ್ರಾಪ್ತಿ ಇಲ್ಲವಯ್ಯ ಶಾಂತವೀರೇಶ್ವರಾ