Index   ವಚನ - 234    Search  
 
ಶುದ್ಧ ಸ್ಥಳದಲ್ಲಿ ಮೃಗಾಜಿನ ಕಂಬಲ ಪಚ್ಚ ಮೊದಲಾದ ಗದ್ದುಗೆಯಲ್ಲಿ ಸಿದ್ಧ ಪದ್ಮವಿನ್ಯಾಸದಲ್ಲಿ ಪೂರ್ವೋತ್ತರಾಭಿಮುಖವಾಗಿ ಕುಳಿತು ಶಿವಲಿಂಗ ಪೂಜಕನು ಭಸ್ಮ ದುದ್ರಾಕ್ಷೆಯನ್ನು ಧರಿಸಿ ಸಗರ್ಭ ಜಪವನು ಗುರೂಪದಿಷ್ಟ ಮಾರ್ಗದಿಂದೆ ಮಾಡುವುದಯ್ಯ ಶಾಂತವೀರೇಶ್ವರಾ