Index   ವಚನ - 233    Search  
 
ಮೂಡಲ ಮುಖವುಳ್ಳವನಾಗಿಯಾದರೂ ಬಡಗಲ ಮುಖವುಳ್ಳವನಾಗಿಯಾದರೂ ಗುರೂಕ್ತ ವಿಧಿಯಿಂದೆ ಪ್ರಾಣಾಯಾಮ ಮಂತ್ರದಿಂದ ಹೃದಯ ಕಲಮದಲ್ಲಿ ತ್ರಯಂಬಕನೆಂದೊಡೆಂತೆನೆ: ಮಂಡಲತ್ರಯ ಗುಣತ್ರಯ ದೇವತಾತ್ರಯ ಮೊದಲಾದ ತ್ರಿವಸ್ತುಗಳಿಗೆ ತಂದೆಯಾದ, ಸಮಸ್ತಾಭರಣಗಳಿಂದ ಕೂಡಿದ, ಚಂದ್ರಮಂಡಲವು ಶಿರಸಿನಲ್ಲುಳ್ಳ, ಪಾರ್ವತಿಯೊಡನೆ ಕೂಡಿರುವ ಪರಮೇಶ್ವರನನು ಧ್ಯಾನಿಸುತ್ತ ಅನ್ಯ ಚಿತ್ತವಿಲ್ಲದೆ ಇದ್ದಾತನು ಶಿವಸ್ವರೂಪವುಳ್ಳ ಈ ಮಂತ್ರವು ಜಪಿಸುವುದಯ್ಯ ಶಾಂತವೀರೇಶ್ವರಾ