Index   ವಚನ - 236    Search  
 
ಆವುದಾನೊಂದು ಮಂತ್ರೋಚ್ಚಾರವು ಎಡಬಲದಲ್ಲಿರುವ ಪರರಿಂದ ಕೇಳದ ಹಾಂಗೆ ಮೆಲ್ಲನೆ ಉಚ್ಚರಿಸುವುದು, ಈ ಮಂತ್ರೋಚ್ಚಾರವೆ ‘ಉಪಾಂಶು ಜಪ’ವೆಂದು ಹೇಳುವರು, ಆವುದಾನೊಂದು ಮಂತ್ರೋಚ್ಚಾರವು ಅಧರವನು ಮುಟ್ಟದೆ ಜಿಹ್ವಾಗ್ರಂ ಚಲಿಸದೆ ಇದ್ದ ಜಿಹ್ವೆಯ ತುದಿಯಲ್ಲಿ ಹೇಗೆ ಉಚ್ಚಾರಣಮಹುದು ಹಾಗೆ ಮಂತ್ರ ಸ್ವರೂಪ ಉಳ್ಳ ಅಂತರ್ಮನಸಿನಿಂದೆ ಭಾವಿಸುವುದು, ಆ ಮಂತ್ರೋಚ್ಚಾರವೆ ‘ಮಾನಸ ಜಪ’ವೆಂದು ಹೇಳುವರಯ್ಯ ಶಾಂತವೀರೇಶ್ವರಾ