ಮೋಕ್ಷಪ್ರದವೆಂದು ಅಭಿವೃದ್ಧಿಕರವೆಂದು ಕಾಮ್ಯವೆಂದು
ಶಾಂತವೆಂದು ಪೌಷ್ಠಿಕವೆಂದು ಪ್ರಸಿದ್ಧವಾದ ಐದು ಮಂತ್ರಗಳೊಳಗೆ,
ಮೋಕ್ಷಪ್ರದವಾದುದನು
ಪಂಚಾಕ್ಷರ ಮಂತ್ರವನಾಗಿ ತಿಳಿಯುವುದು;
ಅಭಿವೃದ್ಧಿಕರವಾದುದನು
ಷಡಕ್ಷರ ಮಂತ್ರವೆಂದು ತಿಳಿಯುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mōkṣapradavendu abhivr̥d'dhikaravendu kāmyavendu
śāntavendu pauṣṭhikavendu prasid'dhavāda aidu mantragaḷoḷage,
mōkṣapradavādudanu
pan̄cākṣara mantravanāgi tiḷiyuvudu;
abhivr̥d'dhikaravādudanu
ṣaḍakṣara mantravendu tiḷiyuvudayya
śāntavīrēśvarā