ಮೂಲ ಪಂಚಾಕ್ಷರವು
‘ಓಂ ನಮಃ ಶಿವಾಯ’ ಎಂಬ ಆರು ಅಕ್ಷರವು.
‘ಓಂ ಹ್ರಾಂ ಹ್ರೀಂ ಹ್ರೂಂ ನಮಃ ಶಿವಾಯ’ ಎಂಬಂಥಾಕ್ಷರವೆ
ಸ್ಥೂಲ ಪಂಚಾಕ್ಷರವು,
ಸೂಕ್ಷ್ಮ ಪಂಚಾಕ್ಷರಿಯು ‘ಓಂ ಹ್ರಿಂ ಶಿವಾಯ’ ಎಂಬ ಅಯ್ದಕ್ಷರ.
‘ಓಂ ಹ್ರೀಂ ಶಿವಾಯ’ ಎಂಬ ಅಯ್ದಕ್ಷರವು ‘ಓಂ ಹ್ರಾಂ ಹ್ರೀಂ ನಮಃಶಿವಾಯ’’
ಎಂಬ ಎಂಟು ಅಕ್ಷರವೆ ಮಾಯಖ್ಯ ಪಂಚಾಕ್ಷರಿಯು.
ಇವು ಐದಾದ ಪಂಚಾಕ್ಷರವೆಂದು ಹೇಳುವರಯ್ಯ
ಶಾಂತವೀರೇಶ್ವರಾ