Index   ವಚನ - 256    Search  
 
ಇನ್ನೀ ಪಂಚಾಕ್ಷರಗಳಿಂದೊದಗುವ ಫಲಗಳೆಂತೆನೆ, ‘ನ’ ಕಾರವು ಶಾಂತ ಸ್ವರೂಪವಾದ ಜ್ಞಾನವನು ಕೊಡುವದು, ‘ಮ’ ಕಾರವು ಪುಷ್ಟಿಯ ಹೆಚ್ಚಿಸುವುದು ‘ಶಿ’ ಕಾರವು ಮಂಗಳವನು ಕೊಡುವುದು, ‘ವಾ’ ಕಾರವು ಸಂತೋಷವನು ಕೊಡುವುದು, ‘ಯ’ ಕಾರವು ಮೋಕ್ಷ ಸಿದ್ಧಯನು ಕೊಡುವುದು. ಈ ಪ್ರಕಾರದಲ್ಲಿ ಪಂಚಾಕ್ಷರ ಮಂತ್ರವು ಅಯ್ದು ಸಿದ್ಧಿ ಫಲವ ಕೊಡುವುದಯ್ಯ ಶಾಂತವೀರೇಶ್ವರಾ