Index   ವಚನ - 257    Search  
 
ಇನ್ನೀ ಷಡಕ್ಷರಗಳ ಉತ್ಕರ್ಷವೆಂತೆನೆ, ಆ ಪ್ರಸಿದ್ಧವಾದ ಶಿವಸಂಬಂಧದ ಈ ಷಡಕ್ಷರವು ಮೋಕ್ಷ ಮಾರ್ಗಕ್ಕೆ ದೀವಟಿಗೆಯು, ಅಜ್ಞಾನವೆಂಬ ಸಮುದ್ರಕ್ಕೆ ಬಡಬಾಗ್ನಿಯಯ್ಯ ಪಂಚಮಹಾ ಪಾತಕಂಗಳೆಂಬ ಅರಣ್ಯಕ್ಕೆ ದಾವಾಗ್ನಿ ಎಂದುದಯ್ಯ ಶಾಂತವೀರೇಶ್ವರಾ