Index   ವಚನ - 260    Search  
 
ಮತ್ತಮಾ ಷಡಕ್ಷರ ಸಂಬಂಧಮೆಂತೆನೆ, ಪಂಚಭೂತಂಗಳಲ್ಲಿ ‘ಓಂ’ ಕಾರ ಸಂಬಂಧ, ಪಂಚ ಕರಣಂಗಳಲ್ಲಿ ‘ಮ’ ಕಾರ ಸಂಬಂಧ ದಶವಾಯುಗಳಲ್ಲಿ ‘ವಾ’ ಕಾರ, ಆ ದಶೇಂದ್ರಿಯಗಳು ‘ನ’ ಕಾರ ಸ್ವರೂಪ, ಪಂಚಕರಣಂಗಳು ‘ಮ’ ಕಾರ ಸ್ವರೂಪ, ಪ್ರಾಣದಲ್ಲಿ ‘ಶಿ’ ಕಾರ ಸಂಬಂಧವು, ದಶವಾಯುಗಳಲ್ಲಿ ‘ವಾ’ ಕಾರವು ಗುಣತ್ರಯ ಸಮೂಹದಲ್ಲಿ ‘ಯ’ ಕಾರ ಸಂಬಂಧವು ಈ ಪ್ರಕಾರದಿಂದ ಸರ್ವಾಂಗದಲ್ಲಿಯೂ ಷಡಕ್ಷರ ಸಂಬಂಧವಯ್ಯ ಶಾಂತವೀರೇಶ್ವರಾ