Index   ವಚನ - 262    Search  
 
ಇನ್ನೀ ಹಲವು ಮಾತುಗಳಿಂದೇನು, ಆವನಾನೊಬ್ಬ ಮಹಾ ಪುರಷನು ಮಹಾಭಕ್ತಿಯಿಂದ ದೇವಾದಿ ದೇವನಾದ ಪರಮೇಶ್ವರನನು ಪೂಜಿಸುತ್ತ ಮೊದಲಲ್ಲಿ ‘ಓಂ’ ಕಾರದೊಡನೆ ಕೂಡಿದ ‘ನಮಃ ಶಿವಾಯ’ ಎಂಬ ಈ ಮಹಾ ಮಂತ್ರವ ಜಪಿಸುವನೊ ಅವನು ಪಂಚಪಾಶಗಳಿಂದ ಪಾರಾಗಿ ಮೋಕ್ಷಸಂಪತ್ತಿಯನು ಎಯ್ದುವನಯ್ಯ ಶಾಂತವೀರೇಶ್ವರಾ