Index   ವಚನ - 263    Search  
 
‘ಯ ಮಃ ಶಿ ನ ವಾ ಓಂ’ ಎಂಬ ಸೃಷ್ಠಿ ಪಂಚಾಕ್ಷರದಿಂದೆ ದೇಹನ್ಯಾಸವ ಮಾಡಿ ‘ನಮಃ ಶಿವಾಯ ಓಂ’ ಎಂಬ ಸಂಹಾರ ಪಂಚಾಕ್ಷರದಿಂದೆ ಷಡಂಗನ್ಯಾಸವ ಮಾಡಿ ‘ಶಿವಾಯ ನಮಃ ಓಂ’ ಎಂಬ ಸ್ಥಿತಿ ಪಂಚಾಕ್ಷರದಿಂದೆ ಕರನ್ಯಾಸವ ಮಾಡಿಕೊಂಡು ಗೂರೂಪದಿಷ್ಠ ಮಾರ್ಗದಿಂದ ಪ್ರಣವ ಪಂಚಾಕ್ಷರವನು ಜಪಿಸುವುದು, ಸ್ತ್ರೀ ಶೂದ್ರ ಜಾತಿಗೆ ‘ಶಿವಾಯ ನಮಃ’ ಎಂದು ಜಪಿಸುವದು ವಿಧಿಯಯ್ಯ ಶಾಂತವೀರೇಶ್ವರಾ