Index   ವಚನ - 267    Search  
 
ಮತ್ತಮಾ ಮಧ್ಯಂಗುಲಮಾದಿ ತರ್ಜನಾಂತಮಾಗಿ ಶಿಕಾರಾದಿ ನಕಾರಾಂತವಾದಕ್ಷರಂಗಳನಾ ಪರಿಯಿಂದ ಅಂಗುಲಿಗಳ ಮಧ್ಯದಿಂದಾಗ್ರ ಪರ್ಯಂತರಮುಳ್ಳದೆ ‘ಸ್ಥಿತಿನ್ಯಾಸ’ವೆನಿಸೂದು. ಬಳಿಕ ಅಂಗುಲಿಗಳ ಪರ್ವಂಗಳಲ್ಲಿಯೂ ಮಂತ್ರಕ್ಷರಂಗಳನಾ ರೀತಿಯಿಂದುತ್ಪತ್ಯಾದಿ ಭೇದವನರಿದು ನ್ಯಾಸಂಗೈಯ್ವದು, ಬಳಿಕ ಪ್ರತ್ಯೇಕಾಂಗುಲಿಗಳಲ್ಲಯೂ ಸಂಪುಟೀಕರಿಸಿ ಪ್ರಣವನ್ಯಾಸಂ ಮಾಡೂದು, ಮತ್ತಮಾ ಕರದ್ವಯದ ಚತುರಂಗುಲಿಯನೆ ಆಯಾ ಅಂಗುಷ್ಠದಿಂ ಅಂಗುಷ್ಠವನೆ ಆಯಾ ತರ್ಜನಿಯಂ ನ್ಯಾಸಂಗೈಯ್ವದು, ಬಳಿಕ ಕರತಳದ್ವಯಕ್ಕೆ ಬಿಂದುಯುಕ್ತ ಪ್ರಣವತ್ರಯಮಂ ವಾಮಕರವನೆ ದಕ್ಷಿಣಕರದಿಂ ದಕ್ಷಿಣಕರವೆ ವಾಮಕರದಿಂದಾ ಕರಂಗಳ ಅನುಲಫಮವಾಗಿಂ ಸಮ್ಮರ್ಜನಂಗೈಯ್ವುದೆ ‘ಸೃಷ್ಠಿನ್ಯಾಸ’ವೆನಿಸೂದು. ವಿಲೋಮವಾಗಿ ಸಮ್ಮಾರ್ಜನಂ ಮಾಳ್ಪುದೆ ‘ಸಂಹಾರನ್ಯಾಸ’ವಹುದು. ಇಂತು ಕರನ್ಯಾಸಮಂ ಮಾಡಿ ಮೇಲೆ ದೇಹದಲ್ಲಿ ಮೂಧ್ನಿ ಮುಖ ಕಂಠ ಹೃದಯ ಗುಹ್ಯ ಪಾದಂಗಳಲ್ಲಿ ಕ್ರಮದಿಂ ಪ್ರಣವಾದಿ ಯಕಾರಾಂತಮಾದ ಪ್ರತ್ಯೇಕ ಬಿಂದು ಸಮೇತಮಪ್ಪ ಮಂತ್ರಾಕ್ಷರಂಗಳಂ ಬಿಂದುಯುಕ್ತ ಪ್ರಣವದ್ವಯ ಸಂಪುಟಮಾಗಿ ಮಾಳ್ಪುದೆ ‘ಸೃಷ್ಟಿ ನ್ಯಾಸ’ವೆನಿಸುವುದಯ್ಯ ಶಾಂತವೀರೇಶ್ವರಾ