ಅನಂತರದೋಳೀ ಪಂಚಾಕ್ಷರಾದಿ ಸಕಲ ಮಂತ್ರ
ಪುರಶ್ಚರಣ ಪ್ರಾರಂಭದಲ್ಲಿ ಶುಭ ಮಾಸಾದಿ ವಿಧಿಕ್ರಮಂಗಳಂ
ವಿಚಾರಿಸಬೇಕಾಗಿಹುದವರಲ್ಲಿ;
ಚೈತ್ರ ಮಾಸದಲ್ಲಿ ದುಃಖ, ವೈಶಾಖದಲ್ಲಿ ರತ್ನಲಾಭ,
ಜೇಷ್ಠದಲ್ಲಿ ಮೃತ್ಯು, ಅಷಾಢದಲ್ಲಿ ಓದುನಾಶ’
ಶ್ರವಾಣದಲ್ಲಿ ಪೂರ್ಣಾಯ, ಭಾದ್ರಪದದಲ್ಲಿ ಪ್ರಜಾಹಾನಿ,
ಆಶ್ವೀಜದಲ್ಲಿ ಸುಲಭ, ಕಾರ್ತೀಕದಲ್ಲಿ ಸರ್ವಸಿದ್ಧಿ,
ಮಾರ್ಗಶೀರದಲ್ಲಿ ಮಾಂಗಲ್ಯ, ಪುಷ್ಯದಲ್ಲಿ ಹಾನಿ,
ಮಾಘದಲ್ಲಿ ಬುದ್ಧಿ ವೃದ್ಧಿ,
ಫಾಲ್ಗುಣದಲ್ಲಿ ಸಕಲ ಸಿದ್ಧಿಗಳಹವೆಂದು
ಮಾಸಂಗಳ ಮನಂಗೊಂಡು ಜಪವಂ ಮಾಡುವದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Anantaradōḷī pan̄cākṣarādi sakala mantra
puraścaraṇa prārambhadalli śubha māsādi vidhikramaṅgaḷaṁ
vicārisabēkāgihudavaralli;
caitra māsadalli duḥkha, vaiśākhadalli ratnalābha,
jēṣṭhadalli mr̥tyu, aṣāḍhadalli ōdunāśa’
śravāṇadalli pūrṇāya, bhādrapadadalli prajāhāni,
āśvījadalli sulabha, kārtīkadalli sarvasid'dhi,
mārgaśīradalli māṅgalya, puṣyadalli hāni,
māghadalli bud'dhi vr̥d'dhi,
phālguṇadalli sakala sid'dhigaḷahavendu
māsaṅgaḷa manaṅgoṇḍu japavaṁ māḍuvadayya
śāntavīrēśvarā