ಬಳಿಕ ಶ್ರೀ ಗುರುವಿನ ಹಸ್ತದಿಂದ
ಮಾಲಿಕೆಗೆ ಪಂಚಗವ್ಯ ಪಂಚಾಮೃತಂಗಳಂ
‘ಓಂ’ ಎಂಬ ಮಂತ್ರದಿಂದ ಅಭಿಷೇಕವಂಗೈದು ಮೇಲೆ ‘ಓಂ’ ಎಂಬ
ಮಂತ್ರದಿಂದವೆ ಜಲಸ್ನಾನ ಮಾಡಿ
ಮೇಲೆ ಗಂಧ ಪುಷ್ಪಾದಿಗಳಿಂ ಪ್ರತ್ಯೇಕ
ಮಣಿಗಳಂ ಮುಟ್ಟಿ ಮುಟ್ಟಿ ‘ಓಂ’
ಎಂಬ ಮಂತ್ರದಿಂದರ್ಚಿಸಿ ನೈವೇದ್ಯ
ತಾಂಬೂಲಾದಿಗಳಂ ಸಮರ್ಪಿಸಿ
ಮೇಲೆ ದಂಡ ನಮಸ್ಕಾರ ದಕ್ಷಿಣೆ ವಿಧಿಗಳಿಂ
ಗುರೂಪದೇಶದಿಂ ಜಪಮಾಲಿಕೆಯಂ ಪಡೆವುದಯ್ಯ
ಶಾಂತವೀರೇಶ್ವರಾ