ಬಳಿಕ ತಾನು ಜಪಂಗೈಯ್ವಲ್ಲಿ
ಮೊದಲು ಜಪ ಮಾಲಿಕೆ ಜಲ ಪುಷ್ಪ ಗಂಧಂಗಳಿಂದರ್ಘ್ಯಮಂ
ಶುಕ್ತಿ ಮುದ್ರೆಯಿಂ ಮಂತ್ರ ಸಹಿತವಾಗಿ ಕೊಟ್ಟು
ಮೇಲಾ ಜಪ ಮಾಲಿಕೆಯ ಸ್ಥೂಲಾದಿ ಸೂಕ್ಷ್ಮಾಂತಮಾಗಿ
ಜಪಂಗೈಯ್ವದೆ ‘ಉತ್ಪತ್ಯ ಸ್ಥಿತಿ’
ಸೂಕ್ಷ್ಮಾದಿ ಸ್ಥೂಲಾದಿ ಸೂಕ್ಷ್ಮಾಂತುಮಾಗಿ ಜಪಿಸುವದೆ
‘ಸಂಹಾರ’ವೆಂದರಿದು
ಪರದೃಷ್ಠಿಗೋಚರಮಾಗದಂತೆ ಶೀಘ್ರವಲ್ಲದೆ ಮಂತ್ರವಲ್ಲದೆ
ಪ್ರತ್ಯೇಕ ಮಣಿಗೊಮ್ಮಮ್ಮೆ ಮಂತ್ರೋಚ್ಚಾರಣದಿಂ ಜಪಿಸುವಲ್ಲಿ
ಪ್ರಮಾದವಶದಿಂ ಮಾಲಿಕೆ ಪತನಮಾಗೆ ಮಂತ್ರಹಾನಿಯಾಗುವದಾಗಿ
ಮತ್ತೆ ಮೊದಲಿಂ ಪ್ರಾರಂಭಿಸಿ
ಮೇರುವನುಲ್ಲಂಘಿಸದೆ ಪ್ರದಕ್ಷಿಣಮಾಗಿ ತಿರುಹಿಕೊಂಡು
ನಮಸ್ಕರಿಸಿ ಮೇಲೆ ಮೊದಲಿನಂತೆ ಪ್ರಾರಂಭಿಸುತ್ತಿಂತು
ತನ್ನ ನೇಮದ ಜಪ ಸಮಾಪ್ತಿಯಾದ
ಮೇಲೆಯೂ ಜಪಮಾಲಿಕೆಗರ್ಘ್ಯಮಂ ಕೊಟ್ಟು
ವಾಮಹಸ್ತದಿಂದ ಜಪಮಾಲೆಕೆಯಂ ಮುಟ್ಟದೆ
ಕಂಠಾದಿಗಳಲ್ಲಿ ಧರಿಸದೆ ಜಪ ಕಾಲದಲ್ಲಿಯೆ ಜಪಂಗೈದು
ಸದಾ ಶುದ್ಧೆ ಸ್ಥಳದಲ್ಲಿರಿಸಬೇಕೆಂಬುದನಂಗೀಕರಸುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Baḷika tānu japaṅgaiyvalli
modalu japa mālike jala puṣpa gandhaṅgaḷindarghyamaṁ
śukti mudreyiṁ mantra sahitavāgi koṭṭu
mēlā japa mālikeya sthūlādi sūkṣmāntamāgi
japaṅgaiyvade ‘utpatya sthiti’
sūkṣmādi sthūlādi sūkṣmāntumāgi japisuvade
‘sanhāra’vendaridu
paradr̥ṣṭhigōcaramāgadante śīghravallade mantravallade
pratyēka maṇigom'mam'me mantrōccāraṇadiṁ japisuvalli
pramādavaśadiṁ mālike patanamāge mantrahāniyāguvadāgi
matte modaliṁ prārambhisi
Mēruvanullaṅghisade pradakṣiṇamāgi tiruhikoṇḍu
namaskarisi mēle modalinante prārambhisuttintu
tanna nēmada japa samāptiyāda
mēleyū japamālikegarghyamaṁ koṭṭu
vāmahastadinda japamālekeyaṁ muṭṭade
kaṇṭhādigaḷalli dharisade japa kāladalliye japaṅgaidu
sadā śud'dhe sthaḷadallirisabēkembudanaṅgīkarasuvudayya
śāntavīrēśvarā