Index   ವಚನ - 285    Search  
 
ದಾಸತ್ವ ವೀರದಾಸತ್ವ ಭೃತ್ಯತ್ವ ವೀರಭೃತ್ಯತ್ವ ಸಮಯಾಚಾರತ್ವ ಸರ್ವಾವ ಸ್ತೋತ್ರಂಗಳೆಂಬಾರು ಸಜ್ಜನ ನಡತೆಯುಕ್ತನಾಗಿ ಅಕ್ರೋಧ, ಸತ್ಯವಚನ, ಕ್ಷಮೆ, ಭವಿ ಭಕ್ತ ಬೇದ, ಅನುಗ್ರಹ, ಸತ್ಪಾತ್ರ ದ್ರವ್ಯಾರ್ಪಣವೆಂಬೀಯಾರು ಶೀಲಂಗಳು. ಗೌರವ ಬುದ್ಧಿ, ಲಿಂಗಲೀಯ, ಜಂಗಮಾನುಭವ ಏಕದಶಪ್ರಸಾದ ಪರಿಜ್ಞಾನ, ಪಾದೋದಕ ನಿರ್ಣಯ, ಭಕ್ತಿ ನಿರ್ವಾಹ, ಆರು ವ್ರತಂಗಳು, ಷಡ್ವಿಧ ಭಕ್ತಿಯಳ್ಳಾತನೆ ಭಕ್ತನಯ್ಯ! ಲಿಂಗಾಚಾರ ಶಿವಾಚಾರ ಸದಾಚಾರ ಗುಣಾಚಾರ ಭೃತ್ಯಾಚಾರವೆಂಬ ಪಂಚಾಚಾರವುಳ್ಳಾತನೆ ಭಕ್ತನಯ್ಯ ಶಾಂತವೀರೇಶ್ವರಾ