Index   ವಚನ - 286    Search  
 
ದಾಸೋಹಂ ಭಾವವೆಂತಹದು ಸೋಹಂ ಭಾವವೆಂತಹದು: ಸೋಹಂ ದಾಸೋಹಂಗಳ ಭೇದವೆಂತೆಂದೊಡೆ, ಭಕ್ತನು ದಾಸೋಹ ಭಾವ ಜಂಗಮನು ದಾಸೋಹ ಭಾವ ಇವೆರಡಕ್ಕೆ ಭೇದವಿಲ್ಲ; ಅದು ಹೇಗೆಂದೊಡೆ ಬಿಂಬ ಪ್ರತಿಬಿಂಬೋಪಾದಿಯಲ್ಲಿ ಭೇಧವಿಲ್ಲವಯ್ಯ ಶಾಂತವೀರೇಶ್ವರಾ