Index   ವಚನ - 294    Search  
 
ಮೃತ್ತಿಕೆ ಶಿಲೆ ಮೊದಲಾಗುಳ್ಳುದರಿಂದ ಮಾಡಿದ ಅಚಾರವಾದಂಥ ಆವುದಾನೊಂದು ಲಿಂಗವ ಧರಿಸಿದ ಚರಲಿಂಗನು ಶಿವಯೋಗೀಶ್ವರನೆಂದು ಪ್ರಸಿದ್ಧವಯ್ಯ ಪರಮೇಶ್ವರನು ಸ್ಥಾವರಲಿಂಗದಲ್ಲಿ ಪ್ರಣವ ಪಂಚಾಕ್ಷರ ಮಂತ್ರದ ಸಂಸ್ಕಾರದಿಂದ ಇರುವನು. ಜಂಗಮ ಲಿಂಗದಲ್ಲಿ ಪರಮೇಶ್ವರನು ಎಲ್ಲ ಕಾಲದಲ್ಲಿಯೂ ಇರುವನೆಂಬುದು ಪ್ರಸಿದ್ಧವಯ್ಯ ಶಾಂತವೀರೇಶ್ವರಾ