Index   ವಚನ - 298    Search  
 
ಅದೆಂತೆನೆ, ಪುರತನರು ಸುಖರೂಪವಾದಂಥ ನೋಡಲ್ತಕ್ಕ ವ್ಯಾಘ್ರದೃಷ್ಟಿ ಕುರಂಗದೃಷ್ಟಿ ಮಾರ್ಜಾಲದೃಷ್ಟಿ ಊರ್ಧ್ವದೃಷ್ಟಿ ಅಧೋದೃಷ್ಟಿ ಸಂಚಲ್ಯ ದೃಷ್ಟಿಗಳಿಂದೆ ಅರೆವಿರಿದರವಿಂದದೋಪಾದಿಯಲ್ಲಿ ಇಷ್ಟಲಿಂಗದ[ಲಿ] ಅನಿಮಿಷ ದೃಷ್ಠಿಯುಳ್ಳವರಾಗಿ ನಡೆವುತ್ತಿಹರು. ಆ ಪುರಾತನರೋಪಾದಿಯಲ್ಲಿ ಗುರು ಲಿಂಗ ಜಂಗಮ ಪ್ರಸಾದವೆಂಬ ನಾಲ್ಕರಿಂದವೆ ಆ ವಸ್ತುವನು ಧ್ಯಾನಿಸಬೇಕು. ವೇದಂಗಳು ವೇದ ಸ್ವರೂಪವಾದ ಗುರು ಲಿಂಗ ಜಂಗಮ ಪ್ರಸಾದವೆಂಬ ನಾಲ್ಕರಿಂದವೆ ಆ ಭಕ್ತರುಗಳನು ಸುಖರೂಪವಾದ ಸ್ಮರಣ, ಪ್ರೇರಣ, ಈಳನ, ಯಜನವೆಂಬೀ ನಾಲ್ಕು ಭಕ್ತಿಯಿಂ ಜ್ಞಾನವನೆಯ್ದಿಸುವುದಯ್ಯ ಶಾಂತವೀರೇಶ್ವರಾ