Index   ವಚನ - 304    Search  
 
ಕಾಯ ವಾಚ ಮಾನಸಗಳೆಂಬ ತ್ರಿಕರಣಗಳಲ್ಲಿ ವಂಚನೆ ಇಲ್ಲದ ಶ್ರೀಗುರುದೇವಂಗೆ ತ್ರಿವಿಧವನು ಕೊಡುವುದೆ ಗುರುಭಕ್ತಿಯಯ್ಯ. ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲವೆಂಬ ಅಷ್ಟವಿಧಾರ್ಚಯಿಂ ಇಷ್ಟಲಿಂಗವನರ್ಚಿಸುವುದೆ ಲಿಂಗಾರ್ಚನೆಯಯ್ಯ ಸ್ನಾನವನ್ನು ಗಂಧವನು ವಸ್ತ್ರವನು ಅಕ್ಷತೆಗಳನು ಪುಷ್ಪಂಗಳನು ಧೂಪ ದೀಪ ನೈವೇದ್ಯ ಶುದ್ಧಾಚಮನ ತಾಂಬೂಲ ಹೊದಪನು ಗೀತ ವಾದ್ಯ ನೃತ್ಯಂಗಳನು ಸ್ತ್ರಿಯರು ಅಭರಣವನು ಅಶ್ವಾದಿ ವಾಹನಂಗಳನು ಮನೆಯನು ಈ ಪ್ರಕಾರಣವಾದ ಹದಿನಾರನು ಜಂಗಮ ಲಿಂಗದಲ್ಲಿ ಭಕ್ತಿಯಿಂದ ಸಮರ್ಪಿಸುವುದೆ ಜಂಗಮ ಭಕ್ತಿಯಯ್ಯ ಶಾಂತವೀರೇಶ್ವರಾ