Index   ವಚನ - 308    Search  
 
ಶಿವಯೋಗೀಶ್ವರನ ಸಂದರ್ಶನವು ಪುಣ್ಯಪ್ರದಮಾದುದಯ್ಯ. ಅವರ ಪಾದಂಗಳ ಸೊಂಕುವುದು ಪಾಪಂಗಳನು ಕೆಡಿಸುವುದಯ್ಯ ಅವರೊಡನೆ ಮಾತನಾಡುವುದು ಸಮಸ್ತ ತೀರ್ಥ ಸ್ನಾನದ ಫಲವಹುದಯ್ಯ ಅವರ ನಮಸ್ಕಾರವು ಮೋಕ್ಕಕ್ಕೆ ಕಾರಣವಯ್ಯ ಶಾಂತವೀರೇಶ್ವರಾ